--Ads--

ಭರ್ಜರಿ ಕಾರ್ಯಾಚರಣೆ ನಡೆಸಿದ ಕೇರಳ ಪೊಲೀಸರು | ನಗರದಲ್ಲಿ ಕುಖ್ಯಾತ ಅಂತಾರಾಜ್ಯ ಡ್ರಗ್‌ ಪೆಡ್ಲರ್‌ ಬಂಧನ

On: February 27, 2026 7:06 PM
Follow us on:
--ಜಾಹೀರಾತು--

Whatsapp Channel

Join Now

Telegram Group

Join Now

ಆನೇಕಲ್ : ಕುಖ್ಯಾತ ಅಂತರರಾಜ್ಯ ಡ್ರಗ್‌ ಪೆಡ್ಲರ್​​​ ಒಬ್ಬನನ್ನು ಕೇರಳ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕೇರಳದ ಮಾದಕವಸ್ತು ನಿಗ್ರಹ ದಳದಿಂದ ಕಾರ್ಯಾಚರಣೆ ನಡೆಸಿದ್ದು, ಅಸ್ಸಾಂ ಮೂಲದ ಪೆಡ್ಲರ್ ಧೀರೇಶ್ ಕುಟುಮ್(27)ರನ್ನು ಬಂಧಿಸಲಾಗಿದೆ.

ಬಂಧಿತನಿಂದ 1 ಕೋಟಿ ರೂ ಮೌಲ್ಯದ ಎಂಡಿಎಂಎ ಡ್ರಗ್ಸ್ ಸೀಜ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ‌ ಪೊಲೀಸರು ಒಟ್ಟು 9 ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ಧೀರೇಶ್ ತಂಗಿಯ ಪತಿ ನೈಜೀರಿಯಾ ಮೂಲದವನು. ಆತನ ಮೂಲಕ ಅಸ್ಸಾಂಗೆ ಎಂಡಿಎಂಎ ರವಾನಿಸುತ್ತಿದ್ದ. ಅಸ್ಸಾಂನಲ್ಲಿರುವ ತಂಗಿ ಮೂಲಕ ಕೇರಳ ಮತ್ತು ಕರ್ನಾಟಕಕ್ಕೆ ಸಾಗಟ ಮಾಡಲಾಗುತ್ತಿತ್ತು. ಸೆರೆಲಾಕ್ ಪಾಕೆಟ್​ಗಳಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆನ್​ಲೈನ್ ಫುಡ್ ಡೆಲಿವರಿ ಬಾಯ್​ ರೀತಿ ಡ್ರಗ್ಸ್​ ಸರಬರಾಜು ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದ ರಮೇಶ್ ರೆಡ್ಡಿ ಬಡಾವಣೆಯಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿದ ಕೇರಳ ಪೊಲೀಸರಿಗೆ 15ಕ್ಕೂ ಹೆಚ್ಚು ಖಾಲಿಯಾದ ಸೆರೆಲಾಕ್ ಪಾಕೆಟ್​ಗಳು ಪತ್ತೆ ಆಗಿವೆ. ಅವುಗಳನ್ನೆಲ್ಲ ಈಗ ಪೊಲೀಸರು ಜಪ್ತಿ ಮಾಡಿದ್ದಾರೆ.

ಇನ್ನು ವಾರದ ಹಿಂದೆ 1 ಕೆಜಿ ಎಂಡಿಎಂಎ ಸಹಿತ ಕೇರಳದ ಮಲಪುರಂನಲ್ಲಿ ಧೀರೇಶ್ ಸಹಚರರು ಸಿಕ್ಕಿಬಿದ್ದಿದ್ದರು. ಒಟ್ಟು 8 ಆರೋಪಿಗಳನ್ನು ಸೆರೆ ಹಿಡಿದಿದ್ದರು. ವಿಚಾರಣೆ ವೇಳೆ ಕಿಂಗ್​ಪಿನ್ ಧೀರೇಶ್ ಕುಟುಮ್ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಇದೀಗ ಪೊಲೀಸರು ಕಿಂಗ್​ಪಿನ್ ಧೀರೇಶ್ ಕುಟುಮ್​​ ನನ್ನು ಬಂಧಿಸಿದ್ದಾರೆ.

Join WhatsApp Channel

Join Now

Telegram Join

Join Now

Instagram Join

Join Now