--Ads--

ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಮತ್ತೆ ಮದುವೆಯಾದ ಪತ್ನಿ ; 23 ದಿನಗಳ ಬಳಿಕ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

On: February 27, 2026 7:02 PM
Follow us on:
--ಜಾಹೀರಾತು--

Whatsapp Channel

Join Now

Telegram Group

Join Now

ತುಮಕೂರು : ತಾಲ್ಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾಗಿರುವ ಹಿನ್ನೆಲೆ ಮೃತನ ಸಾವಿನ ಕುರಿತು ಸಂಶಯ ವ್ಯಕ್ತವಾಗಿದ್ದು, ವ್ಯಕ್ತಿ ಸತ್ತ 23 ದಿನಗಳ ನಂತರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ದಾಸರಹಳ್ಳಿ ನಿವಾಸಿ ಪರಮೇಶ್ (50) ಜನವರಿ 31ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದೇ ದಿನ ಅಂತ್ಯಕ್ರಿಯೆ ನಡೆಸಿ ಮಣ್ಣಿನಲ್ಲಿ ಸಮಾಧಿ ಮಾಡಲಾಗಿತ್ತು. ಆದರೆ ಪರಮೇಶ್ ಮೃತಪಟ್ಟ ಕೆಲವೇ ದಿನಗಳಲ್ಲಿ, ಅಂದರೆ ಫೆಬ್ರುವರಿ 19ರಂದು ಅವರ ಪತ್ನಿ ಮತ್ತೊಂದು ಮದುವೆಯಾಗಿರುವುದು ಸಂಬಂಧಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಮೃತನ ಸಹೋದರಿ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಸಹೋದರನ ಸಾವು ಸಹಜವಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಪರಮೇಶ್ ಮೃತಪಟ್ಟ ಸಂದರ್ಭದಲ್ಲಿ ಅವರ ಮೂಗಿನ ಪಕ್ಕದಲ್ಲಿ ಗಾಯದ ಗುರುತು ಇದ್ದದ್ದು ಹಾಗೂ ಗುಪ್ತಾಂಗ ಊದಿಕೊಂಡಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರುವ ಅವರು ಅಣ್ಣನ ಸಾವು ಸಹಜವಲ್ಲವೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಅಂಶಗಳು ಸಾವಿನ ಕುರಿತು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿವೆ ಎಂದು ತಿಳಿಸಿದ್ದಾರೆ.

ಒಂದು ವಾರದ ಬಳಿಕ ಬಯಲಾಗುತ್ತೆ ರಹಸ್ಯ:

ದೂರು ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಹಸೀಲ್ದಾರ್ ರಾಜೇಶ್ವರಿ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಅನುಮಾನಾಸ್ಪದ ಸಾವು ಪ್ರಕರಣವಾಗಿರುವುದರಿಂದ ವೈದ್ಯರು ಸಂಪೂರ್ಣ ಪರಿಶೀಲನೆ ನಡೆಸಲಿದ್ದು, ಮರಣೋತ್ತರ ಪರೀಕ್ಷೆಯ ವರದಿ ಒಂದು ವಾರದೊಳಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ವರದಿ ಆಧಾರವಾಗಿ ಪರಮೇಶ್ ಅವರ ಸಾವಿನ ನಿಜವಾದ ಕಾರಣ ಬಹಿರಂಗವಾಗಲಿದೆ.

Join WhatsApp Channel

Join Now

Telegram Join

Join Now

Instagram Join

Join Now