
ಬೆಂಗಳೂರು, ಫೆಬ್ರವರಿ 2: ತಿಂಗಳ ಆರಂಭದೊಂದಿಗೆ ಹೋಟೆಲ್ ಮಾಲೀಕರಿಗೆ ಮತ್ತೊಂದು ದುಬಾರಿ ಸುದ್ದಿ! ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹50 ಏರಿಸಿವೆ. ಈಗ ಒಂದು ಸಿಲಿಂಡರ್ ₹1,814 ಖರೀದಿಗೆ ದೋಚುತ್ತದೆ.
ಈಗಾಗಲೇ ಕಚ್ಚಾ ವಸ್ತುಗಳು, ಕಾರ್ಮಿಕ ವೆಚ್ಚಗಳು ಮತ್ತು ನಿರ್ವಹಣಾ ಖರ್ಚುಗಳಿಂದ ಸಂಕಷ್ಟದಲ್ಲಿರುವ ರೆಸ್ಟೋರೆಂಟ್, ಕ್ಯಾಂಟೀನ್‌ಗಳು ಈ ಏರಿಕೆಯಿಂದ ಹೆಚ್ಚಿನ ಒತ್ತಡ ಅನುಭವಿಸುತ್ತಿವೆ. ಇದರಿಂದ ಊಟ-ತಿಂಡಿಯ ಬೆಲೆಗಳಲ್ಲಿ ಸಣ್ಣ ಏರಿಕೆ ಆಗಬಹುದು ಎಂದು ಆತಂಕ ವ್ಯಕ್ತವಾಗಿದೆ.
ಗೃಹ ಬಳಕೆಗೆ ರಿಲೀಫ್:
ಅಲ್ಲದೆ, 14.2 ಕೆಜಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾಮಾನ್ಯ ಗೃಹಿಣಿಯರಿಗೆ ಇದು ಸ್ವಲ್ಪ ನಿರಾಳತೆಯಾಗಿದೆ.
ಏರಿಕೆಯ ಕಾರಣಗಳು: ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯ ಏರಿಳಿತಡಾಲರ್ ಪ್ರತಿ ರೂಪಾಯಿ ಒತ್ತಡ ಇತರ ಆಯಾತ್ ವೆಚ್ಚಗಳು…
ಪ್ರತಿ ತಿಂಗಳು 1ನೇ ದಿನ ತೈಲ ಕಂಪನಿಗಳು ಮಾರುಕಟ್ಟೆ ದರ ಪರಿಶೀಲಿಸಿ ಬೆಲೆ ನಿರ್ಧರಿಸುತ್ತವೆ. ಕಳೆದ ಕೆಲ ತಿಂಗಳುಗಳಲ್ಲಿ ಕೆಲವೊಮ್ಮೆ ಇಳಿಕೆಯಾಗಿದ್ದರೂ, ಈ ಬಾರಿ ವಾಣಿಜ್ಯ ಗ್ಯಾಸ್‌ಗೆ ದುಬಾರಿ ಆಗಿದೆ.
ವರದಿ :- ಆಂಟೋನಿ ಪತ್ರಕರ್ತ





