
ದಳಪತಿ ವಿಜಯ್‌ರ ಬಿಗ್ ಬಜೆಟ್ ಚಿತ್ರ ‘ಜನನಾಯಕನ್’ಗೆ ಮತ್ತೊಂದು ದೊಡ್ಡ ಹಿನ್ನಡೆ. ತೆಲುಗು ಹಿಟ್ ‘ಭಗವಂತ ಕೇಸರಿ’ ರೀಮೇಕ್ ಆಗಿರುವ ಈ ಸಿನಿಮಾ ಜನವರಿ 10ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಸೆನ್ಸಾರ್ ಬೋರ್ಡ್ (CBFC) ಪ್ರಮಾಣಪತ್ರ ನೀಡಲು ತೊಡಕು ಮೂಡಿಸಿತು.
ನಿರ್ಮಾಪಕರು CBFC ವಿರುದ್ಧ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ನಡೆದ ವಿಚಾರಣೆಯಲ್ಲಿ ಕೋರ್ಟ್, ಪ್ರಕರಣವನ್ನು ಏಕಸದಸ್ಯ ನ್ಯಾಯಾಧೀಶರ ಪೀಠಕ್ಕೆ ಮೀಸಲಾಯಿಸಿತು. ಇಬ್ಬು ಪಕ್ಷಗಳಿಗೂ ವಾದ ಮಂಡಿಸಲು ಅವಕಾಶ ನೀಡಿ, ತ್ವರಿತ ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಿದೆ. ಜೊತೆಗೆ, CBFC ಅಧ್ಯಕ್ಷರ ನಿರ್ಧಾರಕ್ಕೆ ಸವಾಲು ಸಲ್ಲಿಸುವಂತೆಯೂ ಆದೇಶಿಸಲಾಗಿದೆ.
CBFC 13 ಕಟ್‌ಗಳನ್ನು ಶಿಫಾರಸು ಮಾಡಿತ್ತು, ನಿರ್ಮಾಪಕರು ಒಪ್ಪಿಕೊಂಡಿದ್ದರೂ ಚೇರ್‌ಮನ್ ಏಕಾಂಗಿಯಾಗಿ ರಿವ್ಯೂ ಕಮಿಟಿಗೆ ಕಳುಹಿಸಿದ್ದಾರೆ. ಇದರಿಂದ ರಿಲೀಸ್ ಇನ್ನಷ್ಟು ವಿಳಂಬಗೊಳ್ಳುವ ಭೀತಿ. ಹೈಕೋರ್ಟ್ ಪೀಠದಲ್ಲಿ ಮತ್ತೆ ವಾದಗಳು ಆರಂಭವಾಗಲಿದ್ದು, ಚಿತ್ರ ಪ್ರೇಮಿಗಳು ಆತಂಕದಲ್ಲಿದ್ದಾರೆ.
ವರದಿ :- ಆಂಟೋನಿ ಪತ್ರಕರ್ತ





