--Ads--

ಬೆಂಗಳೂರು ಗ್ರಾಮಾಂತರ: ಮಾದಕ ನಿಯಂತ್ರಣ ಕಾರ್ಯಾಚರಣೆಯಲ್ಲಿ 11.357 ಕೆಜಿ ಗಾಂಜಾ ವಶ – ಒಬ್ಬರು ಬಂಧನ

On: January 23, 2026 4:14 PM
Follow us on:
--ಜಾಹೀರಾತು--

Whatsapp Channel

Join Now

Telegram Group

Join Now

ಬೆಂಗಳೂರು: ಮಾದಕ ವಸ್ತುಗಳ ಕಳ್ಳಸಾಗಣೆಯ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಇಲಾಖೆಯ ತಂಡಗಳು ಸಾಮೂಹಿಕ ಕಾರ್ಯಾಚರಣೆ ನಡೆಸಿ, ಮೂರು NDPS ಪ್ರಕರಣಗಳನ್ನು ದಾಖಲಿಸಿವೆ. ಈ ಕಾರ್ಯಗಳಲ್ಲಿ ಒಟ್ಟು 11.357 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಹೊಸಕೋಟೆ ವಲಯದ ಅಬಕಾರಿ ಉಪನಿರೀಕ್ಷಕರು ದೊಡ್ಡದುನ್ನಸಂದ್ರದಿಂದ ಅನುಗೊಂಡನಹಳ್ಳಿ ಹಾದಿಯಲ್ಲಿ ಸುಹೇಲ್ ಅಹಮ್ಮದ್ ಬಿನ್ ಹುಸೇಲ್ ಅಹಮ್ಮದ್ ಅವರನ್ನು 0.929 ಕೆಜಿ ಗಾಂಜಾ ಸಾಗಿಸುತ್ತಿರುವಾಗ ಹಿಡಿದು ಬಂಧಿಸಿದ್ದಾರೆ. ಆತನ ವಿರುದ್ಧ ತೀವ್ರ ತನಿಖೆ ನಡೆಯುತ್ತಿದೆ.

ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ 4ನೇ ಫ್ಲ್ಯಾಟ್‌ಫಾರ್ಮ್ ಬಳಿ (ಪೋಲ್ DBU-1032) 4.14 ಕೆಜಿ ಗಾಂಜಾ ಜಪ್ತಿಗೊಂಡಿದ್ದು, ಆರೋಪಿ ತಪ್ಪಿಸಿಕೊಂಡಿದ್ದಾನೆ. ಹೊಸಕೋಟೆ ಉಪವಿಭಾಗದ ದೇವನಹಳ್ಳಿ ರೈಲ್ವೆ ನಿಲ್ದಾಣದ 1ನೇ ಫ್ಲ್ಯಾಟ್‌ಫಾರ್ಮ್‌ನಲ್ಲಿ 6.288 ಕೆಜಿ ಗಾಂಜಾ ಸಹ ವಶವಾಗಿದ್ದು, ಈ ಆರೋಪಿಯೂ ಪರಾರಿಯಾಗಿದ್ದಾನೆ ಎಂದು ಅಬಕಾರಿ ಉಪಾಯುಕ್ತರು ತಿಳಿಸಿದ್ದಾರೆ.

ವರದಿ :- ಆಂಟೋನಿ ಪತ್ರಕರ್ತ

Join WhatsApp Channel

Join Now

Telegram Join

Join Now

Instagram Join

Join Now