--Ads--

ಶೀಳನೆರೆ ಡೈರಿಯಿಂದ ಡಿ.ಸಿ.ಸಿ ಬ್ಯಾಂಕ್ ನೂತನ ನಿರ್ದೇಶಕ ಶೀಳನೆರೆ ಅಂಬರೀಶ್ ಅವರಿಗೆ ಅಭಿನಂದನೆ

On: December 24, 2025 3:48 PM
Follow us on:
--ಜಾಹೀರಾತು--

Whatsapp Channel

Join Now

Telegram Group

Join Now

ಶೀಳನೆರೆ ಡೈರಿಯಿಂದ ಡಿ.ಸಿ.ಸಿ ಬ್ಯಾಂಕ್ ನೂತನ ನಿರ್ದೇಶಕ ಶೀಳನೆರೆ ಅಂಬರೀಶ್ ಅವರಿಗೆ ಅಭಿನಂದನೆ

ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ವತಿಯಿಂದ ಎಂ ಡಿ ಸಿ ಸಿ ಬ್ಯಾಂಕ್ ಅನ್ನುತನ ನಿರ್ದೇಶಕರಾಗಿ ಆಯ್ಕೆಯಾದ ಶೀಳನೆರೆ ಅಂಬರೀಶ್ ರವರಿಗೆ ಸೇಬಿನ ಹಾರ ಹಾಕಿ ಹೃದಯಸ್ಪರ್ಧಿಸುವಂತೆ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಿ.ಸಿ.ಸಿ ನೂತನ ನಿರ್ದೇಶಕ ಶೀಳನೆರೆ ಅಂಬರೀಷ್ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಸನ್ಮಾನದ ಗೌರವೊಂದಾದರೆ ನನ್ನ ಹುಟ್ಟೂರಿನ ನನ್ನ ಗೌರವ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಅದರ ಅನುಗುಣವಾಗಿ ಗ್ರಾಮೀಣ ಪ್ರದೇಶದಲ್ಲಿ ರೈತಾಪಿ ವರ್ಗದ ಜೀವನಾಡಿಯಾಗಿರುವ ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕರಿಸಿ, ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾದ ಬಿತ್ತನೆ ಬೀಜಗಳು, ರಸಗೊಬ್ಬರಗಳು ಹಾಗೂ ಕೃಷಿ ಚಟುವಟಿಕೆ ನಡೆಸಲು ಬೇಕಾಗಿರುವ ಅಗತ್ಯ ಸಾಲ ಸೌಲಭ್ಯವನ್ನು ನೀಡುತ್ತಾ.ಗ್ರಾಮೀಣ ಭಾರತದ ನಿರ್ಮಾಣಕ್ಕೆ ಬೇಕಾಗಿರುವ ಅಗತ್ಯತೆಗಳನ್ನು ಪೂರೈಸುತ್ತಾ ಕೆಲಸ ಮಾಡುತ್ತಿರುವ ಸಹಕಾರ ಸಂಘಗಳು ರಾಜಕೀಯದಿಂದ ಮುಕ್ತವಾಗಿ ರೈತ ಪರವಾಗಿ ಕೆಲಸ ಮಾಡುತ್ತಾ ಈ ಗೌರವ ಸನ್ಮಾನಕ್ಕೆ ಗೌರವ ಹೆಚ್ಚಿಸುತ್ತೇನೆ ಎಂದರು.

ಬಳಿಕ ಮಾತನಾಡಿದ ಗ್ರಾ.ಪಂ ಸದಸ್ಯ ಕೆ.ಬಿ ಪ್ರಕಾಶ್ ರಾಜ್ಯದ ಹಿರಿಯ ಸಹಕಾರಿ ಮುತ್ಸದ್ದಿಗಳಾದ ಮಾಜಿ ಶಾಸಕ ದಿವಂಗತ ಎಸ್.ಎಂ ಲಿಂಗಪ್ಪ ನಮ್ಮ ಗ್ರಾಮದ ಕೀರ್ತಿ ಹೆಚ್ಚಿಸಿ ಇಂದಿಗೂ ಅವರ ಸಹಕಾರ ಕ್ಷೇತ್ರದ ಅವರ ಕಾರ್ಯವೈಕರಿ ಇಂದಿಗೂ ಹಚ್ಚಸಿರಾಗಿ ಉಳಿದಿವೆ ಅವರ ಕುಟುಂಬದ ಸದಸ್ಯರಾಗಿರುವ ಅಂಬರೀಶ್ ಅವರು ಅವರ ಹಾದಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ಹಾಲಿನ ಡೈರಿಯ ಅಧ್ಯಕ್ಷರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುವ ಜೊತೆಗೆ, ಜಿ.ಪಂ ಉಪಾಧ್ಯಕ್ಷರಾಗಿ, ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರಾಗಿಯೂ ಕೆಲಸ ಮಾಡಿ ಸಹಕಾರ ವ್ಯವಸ್ಥೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಪ್ರಾಮಾಣಿಕವಾಗಿ ದುಡಿಮೆ ಮಾಡಿದ್ದಾರೆ. ಅಂಬರೀಶ್ ಅವರ ಗೆಲುವನ್ನು ಕೃಷ್ಣರಾಜಪೇಟೆ ತಾಲೂಕಿನ ಎಲ್ಲಾ ಸಹಕಾರಿ ಬಂಧುಗಳು ಪಕ್ಷಾತೀತವಾಗಿ ಸಂಭ್ರಮಿಸಿದ್ದಾರೆ. ನೂತನವಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಅಂಬರೀಶ್ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಯ ತಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡುವ ಜೊತೆಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕ ಚಟುವಟಿಕೆಗಳ ಕಡೆಗೂ ಗಮನಹರಿಸಿ ಡಿಸಿಸಿ ಬ್ಯಾಂಕ್ ವತಿಯಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡೈರಿ ಉಪಾಧ್ಯಕ್ಷ ಪುರುಷೋತ್ತಮ್, ನಿರ್ದೇಶಕರಾದ ದಿನೇಶ್, ಲೋಕೇಶ್, ಕೃಷ್ಣೆಗೌಡ, ರಾಮಚಂದ್ರ, ಶ್ರೀಧರ್, ಮಂಚಶೆಟ್ಟಿ, ಜಯರಾಮ್, ಮಂಗಳಮ್ಮ, ಪವಿತ್ರ, ಯಶೋಧರ, ನಾಗಪ್ಪ ಅಲ್ಲಿಬಾದಿ, ಹರೀಶ್ ಕುಮಾರ್, ಕಾರ್ಯದರ್ಶಿ ಶರತ್ ಕುಮಾರ್, ಸಹಾಯಕ ರಾಜೇಶ್,ಮುಖಂಡರಾದ ಕೆ.ಬಿ ಪ್ರಕಾಶ್,ರಾಜೇಶ್, ಚೇತನ್, ಮಂಜುನಾಥ್, ಎಸ್.ಸಿ ಕೃಷ್ಣ, ಪರಮೇಶ್,ಶಂಕರ್, ಕೃಷ್ಣೆಗೌಡ, ಸೇರಿದಂತೆ ಉಪಸ್ಥಿತರಿದ್ದರು.

Join WhatsApp Channel

Join Now

Telegram Join

Join Now

Instagram Join

Join Now