
ದಿ ಮೈಸೂರು ಎಲೆಕ್ನಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಅದ್ದೂರಿ 70ನೇ ಕನ್ನಡ ರಾಜ್ಯೋತ್ಸವ
ನಾಡು, ನುಡಿ, ನೆಲ, ಜಲ ಸಂರಕ್ಷಣೆಗಾಗಿ ಸರ್ಕಾರ ಕಟಿಬದ್ದವಾಗಿ ಶ್ರಮಿಸುತ್ತಿದೆ, ನಾಡಿನ ರಕ್ಷಣೆಗೆ ತ್ಯಾಗಕ್ಕೆ ಸಿದ್ದರಾಗಿ-ಸಚಿವ ಈಶ್ವರ್ ಖಂಡ್ರೆ
ಗೋಕಾಕ್ ಚಳುವಳಿಯಿಂದ ಕನ್ನಡ, ಕನ್ನಡಿಗರು ಉಳಿಯಲು ಸಾಧ್ಯವಾಯಿತು, ದ್ವೀಭಾಷ ಸೂತ್ರ ಆಳವಡಿಸಿ, ಹಿಂದಿ ಭಾಷೆ ಹೇರಿಕೆ ಬೇಡ-ಸಾ.ರಾ.ಗೋವಿಂದು
ಯಶವಂತಪುರ: ದಿ ಮೈಸೂರು ಎಲೆಕ್ನಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅಚರಣೆ.
ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆರವರು, ನಿರ್ಮಾಪಕರು, ಕನ್ನಡ ಪರ ಹೋರಾಟಗಾರರಾದ ಸಾ.ರಾ.ಗೋವಿಂದು, ಹಿರಿಯ ಸಾಹಿತಿ ತಲಕಾಡು ಚಿಕ್ಕರಂಗೇಗೌಡರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಸೂರಜ್ ಹೆಗಡೆ, ದಿ ಮೈಸೂರು ಎಲೆಕ್ನಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರಾದ ಎಸ್.ಮನೋಹರ್ ರವರು, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಅನಿತಾ ಸಿ, ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್ ರವರು ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಚಿವರಾದ ಈಶ್ವರ್ ಖಂಡ್ರೆರವರು ಮಾತನಾಡಿ ಮಾತೃ ಭಾಷೆ ತಾಯಿ ಸಮಾನ, ಸರ್ವ ಜನಾಂಗ ತೋಟ ಕರ್ನಾಟಕವಾಗಿದೆ.
ಕಾವೇರಿಯಿಂದ ಗೋದಾವರಿವರಗೆ ಸಂಪತ್ತು ಭರಿತ , ಎಲ್ಲ ರೀತಿಯಲ್ಲಿ ಶ್ರೀಮಂತವಾಗಿದೆ ಕರ್ನಾಟಕ.
ಇಡಿ ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದೆ. ಇಂಗ್ಲೀಷ್ ಬೇಕು, ಕನ್ನಡ ಭಾಷೆ ಮರೆಯಬಾರದು, ಸ್ವಾಭಿಮಾನ ಇರಬೇಕು.
ದೇಶದಲ್ಲಿ ಆನೆಗಳು ಹೆಚ್ಚು ಇರುವ ರಾಜ್ಯ ಕರ್ನಾಟಕ, ಹುಲಿಗಳಲ್ಲಿ ಎರಡನೇಯ ಸ್ಥಾನ, ಚಿರತೆ ಮೂರನೇಯ ಸ್ಥಾನದಲ್ಲಿ ಇದ್ದೀವಿ.
ಕರ್ನಾಟಕ ರಾಜ್ಯ ಸರ್ಕಾರ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಿದೆ, ಆಡಳಿತ ವ್ಯವಹಾರ ಕನ್ನಡದಲ್ಲಿ ನಡೆಯುತ್ತಿದೆ.
ಸರಿಸಮಾನ, ಅಸಾಮಾನತೆ ಪ್ರಾದೇಶಿಕ ಅಸಮತೋಲನ ನಿವಾರಣೆ ಕಟಿಬದ್ದವಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ.
ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಗಟ್ಟಲು ನಮ್ಮ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ.
ನಾಡು, ನುಡಿ, ನೆಲ, ಜಲ ಸಂರಕ್ಷಣೆ ನಮ್ಮ ಸರ್ಕಾರ ಬದ್ದವಾಗಿದೆ. ನಮ್ಮ ರಾಜ್ಯ ರಕ್ಷಣೆಗಾಗಿ ಎಲ್ಲರು ತ್ಯಾಗಕ್ಕೆ ಸಿದ್ದರಾಗಿರಿ ಎಂದು ಹೇಳಿದರು.
ಸಾ.ರಾ.ಗೋವಿಂದು ರವರು ಮಾತನಾಡಿ ಕನ್ನಡಿಗರು ಉತ್ತಮ ಸಂಸ್ಕೃತಿವುಳ್ಳವರು. ನಾಡಹಬ್ಬವನ್ನು ಅದ್ದೂರಿಯಾಗಿ ಅಚರಣೆ ಮಾಡುತ್ತಿದ್ದೇವೆ. ಭಾಷವಾರು ಪ್ರಾಂತ್ಯವಾದ ಮೇಲೆ ಕನ್ನಡಿಗರ ಪರಿಸ್ಥಿತಿ ಉತ್ತಮವಾಗಿಲ್ಲ.
ಕನ್ನಡ ಪರ ಹೋರಾಟಗಾರರು ಸತತ ಹೋರಾಟ, ಗೋಕಾಕ್ ಚಳುವಳಿಯಿಂದ ಕನ್ನಡ ಭಾಷೆ ಉಳಿಯಲು ಸಾಧ್ಯವಾಯಿತು.
ಅಕ್ಕಪಕ್ಕದ ರಾಜ್ಯ ತಮಿಳುನಾಡು,ಆಂಧ್ರ, ಕೇರಳದಲ್ಲಿ ಸ್ಥಳೀಯ ಭಾಷಿಕರಿಗೆ ಹೆಚ್ಚಿನ ಮಾನ್ಯತೇ ಸಿಕ್ಕಿದೆ ಅದರೆ ಕನ್ನಡಿಗರಿಗೆ ಸಿಕ್ಕಿಲ್ಲ.
ಇಷ್ಟು ವರ್ಷವಾದರು ಕನ್ನಡ ಭಾಷೆ ಉಳಿಸಬೇಕು ಎಂಬ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಕನ್ನಡ ಭಾಷೆ ಉಳಿಯಲು ಹೋರಾಟಗಾರರ ಕೊಡುಗೆ ಇದೆ.
ಅನ್ಯ ಭಾಷಿಕರ ದಬ್ಬಾಳಿಕೆಯನ್ನು ಬಾಯಿ ಮುಚ್ಚಿಸುವ ಕಾರ್ಯ ಮಾಡಲಾಯಿತು. ಶ್ರೀರಾಮಪುರ, ದಯಾನಂದನಗರದಲ್ಲಿ ಕನ್ನಡಿಗರು ಕನ್ನಡ ರಾಜ್ಯೋತ್ಸವ ಮಾಡುವ ಸಾಧ್ಯವಿರಲ್ಲಿಲ ಅದರೆ50ಸಾವಿರ ಕನ್ನಡ ಕಾರ್ಯಕರ್ತರ ಜೊತೆಯಲ್ಲಿಅದ್ದೂರಿ ಕನ್ನಡ ರಾಜ್ಯೋತ್ಸವ ಅಚರಿಸಲಾಯಿತು. ಅನ್ಯ ಭಾಷಿಗರ ಗೊಡ್ಡು ಬೆದರಿಕೆಗೆ ಜಗ್ಗಲ್ಲಿಲ.
ಅಚ್ಚುಗಾಲಿ ಕಾರ್ಖಾನೆ ಕೇಂದ್ರ ಸರ್ಕಾರದ ಒಡೆತನದಲ್ಲಿತ್ತು ಕನ್ನಡಿಗರಿಗೆ ಉದ್ಯೋಗ ಅವಕಾಶ ಕೊಡಬೇಕು ಎಂದು ಪ್ರಧಾನಿ ಇಂದಿರಾಗಾಂಧಿರವರಿಗೆ ಮನವಿ ಸಲ್ಲಿಸಿದ ಕಾರಣದಿಂದ ಕನ್ನಡಿಗರಿಗೆ ಕೇಂದ್ರ ಸರ್ಕಾರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಲಭಿಸಿತು.
ಗೋಕಾಕ್ ಚಳುವಳಿ ಕನ್ನಡ, ಕನ್ನಡಿಗರು ಉಳಿಯಲು ಸಾಧ್ಯವಾಯಿತು. ದ್ವೀಭಾಷ ಸೂತ್ರ ಆಳವಡಿಸಿ, ಹಿಂದಿ ಭಾಷೆ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಲಾಯಿತು ಉತ್ತಮ ಸ್ಪಂದನೆ ಸಿಕ್ಕಿದೇ ಎಂದು ಹೇಳಿದರು.
ಕೆಪಿಸಿಸಿ ಸದಸ್ಯರಾದ ಜಯಸಿಂಹ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಜನಾರ್ಧನ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಪರಿಸರ ರಾಮಕೃಷ್ಣ, ಸುಧಾಕರ್, ಆನಂದ್ , ಪ್ರಕಾಶ್ ರವರು ಮತ್ತು ಎಂ.ಇ.ಐ.ಸಂಸ್ಥೆಯ ಅಧಿಕಾರಿ, ನೌಕರರು ಪಾಲ್ಗೊಂಡಿದ್ದರು.





