
ನಗರದಲ್ಲಿ 1970ರಲ್ಲಿ ನಟ ಡಾ.ರಾಜ್‌ಕುಮಾರ್ ಚಾಲನೆ ನೀಡಿದ ಅತಿ ದೊಡ್ಡ ಚಿತ್ರಮಂದಿರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಲಾಲ್‌ಬಾಗ್ ರಸ್ತೆಯಲ್ಲಿರುವ ಊರ್ವಶಿ ಥಿಯೇಟರ್ ಫೆಬ್ರವರಿಯಲ್ಲಿ ನೆಲಸಮ ಆಗಲಿದೆ ಎಂಬ ವಿಷಯ ಸಿನಿ ಪ್ರಿಯಾರಿಗೆ ಶಾಕ್ ನೀಡಿದೆ.
100 ದಿನಗಳ ಪ್ರದರ್ಶನ ಕಂಡಿದ್ದ ಶಿವಣ್ಣನ ಸಿನಿಮಾ:ಅನೇಕ ಕನ್ನಡ ಸಿನಿಮಾಗಳು ಇಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿವೆ. ಉದಾಹರಣೆಗೆ, ಶಿವರಾಜ್ಕುಮಾರ್ ಅಭಿನಯದ AK47 ಯಶಸ್ವಿ 100 ದಿನಗಳ ಪ್ರದರ್ಶನ ಕಂಡಿತ್ತು.
ನಗರದಲ್ಲಿ ಮಾಲ್‌ಗಳು ಶುರುವಾದ ನಂತರದ ದಿನಗಳಲ್ಲಿ ಬಹುತೇಕ ಸಿಂಗಲ್ ಸ್ಟೀನ್ ಚಿತ್ರಮಂದಿರಗಳು ಮುಚ್ಚುತ್ತಾ ಬಂದಿವೆ. ಒಂದೇ ಬಾರಿ 1,100 ಮಂದಿ ಸಿನಿಮಾ ನೋಡಬಹುದಾದ ಆಸನದ ವ್ಯವಸ್ಥೆಯನ್ನು ಈ ಚಿತ್ರಮಂದಿರ ಹೊಂದಿತ್ತು. ಈ ಚಿತ್ರಮಂದಿರವನ್ನು 1970ರಲ್ಲಿ ಕೆ.ಸಿ.ಎನ್.ಗೌಡ್ರು ಕಟ್ಟಿಸಿದರು. ಊರ್ವಶಿ ಥಿಯೇಟರ್ ಇರುವ ಜಾಗದಲ್ಲಿ ಮೊದಲು ಒಂದು ಕಲ್ಯಾಣಿ ಇತ್ತು. ಈ ಕಲ್ಯಾಣಿ ಸಮೀಪದಲ್ಲಿ ಒಂದು ಸ್ಮಶಾನವಿತ್ತು. ಕನ್ನಡ ಚಿತ್ರರಂಗದ ನಿರ್ಮಾಪಕ ಕೆ.ಸಿ.ಎನ್.ಗೌಡ್ರು ಕೆಲ ಸ್ನೇಹಿತರ ಜೊತೆಗೂಡಿ ಆ ಜಾಗಕ್ಕೆ ತಿಂಗಳಿಗೆ 2 ರಿಂದ 5,೦೦೦ ರೂ. ಕೊಡುವ ಒಪ್ಪಂದದ ಮೇರೆಗೆ, 25 ವರ್ಷಕ್ಕೆ ಭೋಗ್ಯಕ್ಕೆ ತೆಗದುಕೊಂಡಿದ್ದರು. ಕಲ್ಯಾಣಿಯನ್ನು ಮುಚ್ಚಿ ಆ ಜಾಗದಲ್ಲಿ ಊರ್ವಶಿ ಚಿತ್ರಮಂದಿರ ಕಟ್ಟಿಸಿದ್ದರು. ಈ ಚಿತ್ರಮಂದಿರವನ್ನು ವರನಟ ಡಾ.ರಾಜ್‌ಕುಮಾರ್ ಕುಮಾರ್ ಅವರು ಉದ್ಘಾಟಿಸಿದ್ದರು ಹಾಗು ರಾಜ್‌ಕುಮಾರ್ ನಟಿಸಿದ್ದ ಬಹದ್ದೂರ್ ಗಂಡು ಸಿನಿಮಾ ಊರ್ವಶಿಯಲ್ಲಿ ಮೊದಲ ಸಿನಿಮಾವಾಗಿ ಪ್ರದರ್ಶನಗೊಂಡಿತ್ತು.
ದೊಡ್ಡ ದೊಡ್ಡ ಸ್ಟಾರ್ ನಟರ ಸುಮಾರು 5,೦೦೦ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡು ದಾಖಲೆ ಬರೆದಿದ್ದವು. ಅಡ್ವಾನ್ಸ್ ಟೆಕ್ನಾಲಜಿಯನ್ನು ಅಳವಡಿಸಲಾಗಿತ್ತು. ಸೌಂಡ್‌ಗೆ ಮೇಯರ್ ಎನ್ನುವ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಚಿತ್ರಮಂದಿರದಲ್ಲಿ ಸ್ಟೀನ್ ಸೌಂಡ್ ಬಗ್ಗೆ ವೀಕ್ಷಕರಿಂದ ಯಾವುದೇ ಒಂದು ದೂರು ಬಂದಿರಲಿಲ್ಲ ಹಾಗು ಭಾರತದಲ್ಲಿ ಎರಡೇ ಎರಡು ಚಿತ್ರಮಂದಿರಗಳಲ್ಲಿ ಈ ತಂತ್ರಜ್ಞಾನವಿದೆ ಎಂದು ತಿಳಿದುಬಂದಿದೆ.
ಈ ಚಿತ್ರಮಂದಿರದ ಭೋಗ್ಯ 2018 ಕ್ಕೆ ಮುಗಿದಿದೆ. ಆದರೂ, ರವಿಶಂಕರ್ ಹಾಗೇ ಭೋಗ್ಯದ ಹಣ ಕೊಟ್ಟುಕೊಂಡು ಬಂದಿದ್ದರು. ಇತ್ತೀಚೆಗೆ ಜಮೀನು ಮಾಲೀಕರು ಕೋರ್ಟ್ ಮೆಟ್ಟಿಲೇರಿದ ಕಾರಣ, ಈಗ ಚಿತ್ರಮಂದಿರವನ್ನು ನೆಲಸಮ ಮಾಡಲು ಕೋರ್ಟ್ ಆದೇಶ ನೀಡಿದೆ.





