
ವಿಜಯಪುರ: ವಿಜಯಪುರ ಕೃಷಿಇಲಾಖೆ ಎ.ಡಿ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಭ್ರಷ್ಟ ಅಧಿಕಾರಿ ನಿವಾಸದಲ್ಲಿ ಕಂತೆ ಕಂತೆ ಹಣ, ಚಿನ್ನಾಭರಣ, ಬೆಳ್ಳಿ ಪತ್ತೆಯಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಕೃಷಿ ಎ.ಡಿ ಮಾಳಪ್ಪ ಯರಝರಿ ನಿವಾಸದ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ 2.50 ಕೋಟಿ ಆಸ್ತಿ ಗಳಿಕೆ ಮಾಡಿರೋದು ಪತ್ತೆ ಹಚ್ಚಿದ್ದಾರೆ.
ರೇಡ್ ವೇಳೆ 29.48 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಪತ್ತೆ, ವಾಹನ, ಆಸ್ತಿ ಸಂಬಂಧ ದಾಖಲೆಗಳು ಪತ್ತೆಯಾಗಿವೆ.
ಆದಾಯಕ್ಕಿಂತ 2.50 ಕೋಟಿಯ ಅಕ್ರಮ ಆಸ್ತಿ ಗಳಿಕೆ ಮಾಡಿರೋದು ತನಿಖೆಯಲ್ಲಿ ಬಹಿರಂಗವಾಗಿದ್ದು ರೇಡ್ ವೇಳೆ ಸಿಕ್ಕ ನಗದು, ಚಿನ್ನ, ಆಸ್ತಿ ಪತ್ರ, ವಾಹನ ಪರಿಶೀಲನೆ ಬಗ್ಗೆ ಲೋಕಾಯುಕ್ತರು ಮಾಹಿತಿ ನೀಡಿದ್ದಾರೆ.





