
ಕಲಬುರಗಿ: ಕೃಷಿ ಉತ್ಪನ್ನಗಳ ರಾಶಿಯಲ್ಲಿ ಶುದ್ಧತೆ ಕೊರತೆಯ ಕೊರಗನ್ನು ನಿವಾರಿಸಲು ಉನ್ನತೀಕೃತ ಕಂಬೈನ್ ಹಾರ್ವೆಸ್ಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಇಂದು ಲೋಕಾರ್ಪಣೆಗೊಳಿಸಿದರು. ಡಾ.ಎಸ್‌ಎಂ ಪಂಡಿತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ 11 ಯಂತ್ರಗಳನ್ನು ರೈತರ ಉಪಯೋಗಕ್ಕೆ ಬಿಟ್ಟರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮ್ಯಾಕ್ರೋ ಯೋಜನೆಯಡಿ ಜಿಲ್ಲಾ ಎಫ್‌ಪಿಒ ಕೇಂದ್ರಗಳ ಮೂಲಕ ಕ್ಲೀನಿಂಗ್, ಗ್ರೇಡಿಂಗ್ ಮತ್ತು ಪ್ಯಾಕಿಂಗ್ ಯಂತ್ರಗಳು ಬಾಡಿಗೆಗೆ ಲಭ್ಯ. ಸರ್ಕಾರ 5.50 ಕೋಟಿ ರೂ. ವ್ಯಯಿಸಿದೆ.
ಹಿಂದಿನ ಯಂತ್ರಗಳು ಸಮರ್ಪಕ ರಾಶಿ ಮಾಡದಿದ್ದರಿಂದ ರೈತರಿಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಈ ಉನ್ನತ ಯಂತ್ರಗಳು 100% ಶುದ್ಧತೆ ಖಾತರಿ ಮಾಡುತ್ತವೆ ಎಂದು ಸಚಿವ ಖರ್ಗೆ ತಿಳಿಸಿದರು.
ಕೇಂದ್ರಗಳ ಸ್ಥಳಗಳು :- ಅಫಜಲಪುರ ತಾಲೂಕು: ಅಫಜಲಪುರ, ಅತನೂರ ಕಲಬುರಗಿ ತಾಲೂಕು: ಕಲಬುರಗಿ ಸೇಡಂ ತಾಲೂಕು: ಸೇಡಂ ಪಟ್ಟಣ, ಕೋಡ್ಲಾದ ಚಿತ್ತಾಪುರ ತಾಲೂಕು: ಚಿತ್ತಾಪುರ ಪಟ್ಟಣ, ಗುಂಡಗುರ್ತಿ, ಅಲ್ಲೂರ ಬಿ, ಡಿಗ್ಗಾಂವ, ಹೆಬ್ಬಾಳ, ರಾವೂರ..
2024-25 ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ಶಾಸಕ ಅಲ್ಲಮಪ್ರಭು ಪಾಟೀಲ್ ಅನುದಾನದಿಂದ ತಲಾ 5 ಲಕ್ಷ ರೂ. ವೆಚ್ಚದ ರಾಶಿ ಮಷೀನ್ ಮತ್ತು ರೋಟವೇಟರ್‌ಗಳನ್ನು ವಿತರಿಸಲಾಯಿತು:
ಕೆರಿಭೋಸಗಾ ಗ್ರಾಮದ ವಿಠಲ್ ಭಿಮಶಾ ಪೂಜಾರಿ,ಭೀಮಳ್ಳಿ ಗ್ರಾಮದ ಸಂತೋಷ ಗಣಪತಿ ವಿಕಲಚೇತನರಿಗೆ ಕೃಷಿ ಯಂತ್ರ ವಿತರಣೆ ಮಾಡಲಾಯಿತು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕಲಬುರಗಿ ಉತ್ತರ ಶಾಸಕ ಕನೀಜ್ ಫಾತಿಮಾ, ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಎಂವೈ ಪಾಟೀಲ, ವಿಧಾನಪರಿಷತ್ ಸದಸ್ಯರು ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ್, ನಗರಾಭಿವೃದ್ಧಿ ಅಧ್ಯಕ್ಷ ಮಜಹರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನಮ್, ಸಿಇಒ ಭಂವರ್ ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸ ಸೇರಿದಂತೆ ಇತರರು ಉಪಸ್ಥಿತರಿದ್ದರು.
(ವರದಿ: ಆಂಟೊನಿ)





