
ಬೆಂಗಳೂರು: ನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರ್ಕಾರಿ ಜಾಗಗಳ ಮೇಲಿನ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಶುಕ್ರವಾರ ದೊಡ್ಡ ಯಶಸ್ಸು ಸಾಧಿಸಲಾಗಿದೆ.
ಒಟ್ಟು 4.15 ಎಕರೆಯ 6.26 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಸರ್ಕಾರಿ ಹಕ್ಕಿಗೆ ಮರಳಿಯಾಗಿ ಕಟ್ಟಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಜಿ. ಜಗದೀಶ ಅವರು ತಿಳಿಸಿದಂತೆ, ಸ್ಮಶಾನ, ಓಣಿ ದಾರಿ, ರಾಜಕಾಲುವೆ, ಕುಂಟೆ, ಖರಾಬು ಮತ್ತು ಪಡ ಜಾಗಗಳ ಮೇಲಿನ ಒತ್ತುವರಿಗಳನ್ನು ತಾಲೂಕು ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.
ಪ್ರಮುಖ ಒತ್ತುವರಿ ತೆರವು ವಿವರಗಳು:-
ಬೆಂಗಳೂರು ಪೂರ್ವ ತಾಲೂಕು: ಕೆ.ಆರ್. ಪುರ ಹೋಬಳಿ, ನಾಗೊಂಡನಹಳ್ಳಿ ಸ.ನಂ. 21 ಸ್ಮಶಾನ ಜಾಗದ 0.4 ಗುಂಟೆ — ₹1 ಕೋಟಿ ಮೌಲ್ಯ
ಆನೇಕಲ್ ತಾಲೂಕು: ಕಸಬಾ ಹೋಬಳಿ, ಬೆಸ್ತಮಾರನಹಳ್ಳಿ ಸ.ನಂ. 24, 25, 26, 27, 30 ಓಣಿ ದಾರಿ — 1 ಎಕರೆ, ₹80 ಲಕ್ಷ
ಅತ್ತಿಬೆಲೆ ಹೋಬಳಿ: ಇಂಡ್ಲಬೆಲೆ ಗ್ರಾಮ ಸ.ನಂ. 128, 129, 130 ರಾಜಕಾಲುವೆ — 0.30 ಗುಂಟೆ, ₹60 ಲಕ್ಷ ಹೆಬ್ಬಗೋಡಿ ಗ್ರಾಮ ಸ.ನಂ. 90 ಕುಂಟೆ — 0.28 ಗುಂಟೆ, ₹90 ಲಕ್ಷ
ಸರ್ಜಾಪುರ ಹೋಬಳಿ: ಚಿಕ್ಕನಾಗಮಂಗಲ ಸ.ನಂ. 177 ಖರಾಬು — 0.10 ಗುಂಟೆ, ₹1 ಕೋಟಿ
ಬೆಂಗಳೂರು ದಕ್ಷಿಣ ತಾಲೂಕು: ತಾವರಕೆರೆ ಹೋಬಳಿ, ಕುರುಬರಹಳ್ಳಿ ಸ.ನಂ. 198 ಸರ್ಕಾರಿ ಬಿ ಖರಾಬು — 0.23 ಗುಂಟೆ, ₹46 ಲಕ್ಷ ಬೇಗೂರು ಹೋಬಳಿ, ಬೆಟ್ಟದಾಸನಪುರ ಸ.ನಂ. 16 ಸರ್ಕಾರಿ ಜಾಗ — 1 ಎಕರೆ, ₹1.50 ಕೋಟಿ
ಈ ಒತ್ತುವರಿ ತೆರವು ಕಾರ್ಯಾಚರಣೆಯಿಂದಾಗಿ ಸಾರ್ವಜನಿಕ ಸೌಲಭ್ಯಗಳು ಮತ್ತು ರಾಜ್ಯ ಸಂಪನ್ಮೂಲ ರಕ್ಷಣೆಗೆ ದೊಡ್ಡ ಉಪಕಾರ ಆಗಿದೆ. ಜಿಲ್ಲಾಧಿಕಾರಿಗಳು ಇಂತಹ ಕಾರ್ಯಾಚರಣೆಗಳನ್ನು ಶೀಘ್ರಗತಿಯಲ್ಲಿ ಮುಂದುವರೆಸುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
(ವರದಿ: ಆಂಟೊನಿ)





