--Ads--

ತಿ.ನರಸೀಪುರ: ಅಕ್ಷರದವ್ವ, ಮಾತೆ ಸಾವಿತ್ರಿಭಾಯಿ ಫುಲೆ ಜನ್ಮದಿನೋತ್ಸವ ಆಚರಣೆ

On: January 3, 2026 9:23 PM
Follow us on:
--ಜಾಹೀರಾತು--

Whatsapp Channel

Join Now

Telegram Group

Join Now

ಮೈಸೂರು: ತಿ.ನರಸೀಪುರ ಪಟ್ಟಣದಲ್ಲಿ ಅಕ್ಷರದವ್ವ, ಮಾತೆ ಸಾವಿತ್ರಿಬಾಯಿ ಫುಲೆ ರವರ ಜಯಂತಿಯನ್ನು ಆಚರಿಸಲಾಯಿತು.

ಟಿ ನರಸೀಪುರ ಪಟ್ಟಣದ ತಾಲ್ಲೂಕು ಆಡಳಿತ ಸೌಧ ಕಛೇರಿ ರಸ್ತೆಯಲ್ಲಿರುವ ಪ್ರಗತಿಪರ ಸಂಘಟನೆಯ ಕಚೇರಿಯಲ್ಲಿ  ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ವಿಚಾರವಾದಿ ಕೆ ಎನ್ ಪ್ರಭುಸ್ವಾಮಿ ಮಾತನಾಡಿ 2. ಸಾವಿರ ವರ್ಷಗಳ ಕಾಲ  ಶಿಕ್ಷಣದಿಂದ ವಂಚಿತರಾಗಿದ್ದ ಎಸ್ಸಿ ಎಸ್ಟಿ ಗಳಿಗೆ ಹಾಗೂ ಎಲ್ಲಾ ಸಮುದಾಯದ ಶೋಷಿತರಿಗೆ ಶಿಕ್ಷಣವನ್ನು ಕೊಟ್ಟಂತಹ ಮಹಾನ್ ವ್ಯಕ್ತಿಗಳು ಜ್ಯೋತಿಬಾಪುಲೆ ಮತ್ತು ಮತ್ತು ಮಾತೆ ಸಾವಿತ್ರಿಬಾಯಿ ಎಂದರು.

ಇವರು 1848ರಲ್ಲಿ ಮಹಾರಾಷ್ಟ್ರ ನಗರದ ಪುಣೆಯ ಬಿದೇವಾಡದಲ್ಲಿ  ಕನ್ಯಾ ಶಾಲೆಯನ್ನು ತೆರೆದರು. ಇವರು ಕೊಟ್ಟ ಶಿಕ್ಷಣದಿಂದ ಮತ್ತು ಬಾಬಾ ಸಾಹೇಬರ ಸಂವಿಧಾನದಿಂದ ಇಂದಿರಾ ಗಾಂಧಿ ಅಂತವರು ಪ್ರಧಾನ ಮಂತ್ರಿ ಆಗಲು ಹಾಗೂ ಸಾವಿರಾರು ಮಹಿಳೆಯರು ಮಂತ್ರಿಗಳಾಗಿ ಮುಖ್ಯಮಂತ್ರಿಗಳಾಗಿ ದೊಡ್ಡ ದೊಡ್ಡ ಹುದ್ದೆಗಳ ಅಲಂಕರಿಸಲು ಅವಕಾಶ ಆಯಿತು ಎಂದರು.

ಈ ಸಂದರ್ಭದಲ್ಲಿ ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಮತ್ತು ಸೋಸಲೆ ರಾಜಶೇಖರ್ ಮೂರ್ತಿ ಮಾತನಾಡಿದರು.

ಈ ಸಂದರ್ಭದಲ್ಲಿ. ಡಾಕ್ಟರ್ ಮಲ್ಲಿಕಾರ್ಜುನ ಸ್ವಾಮಿ, ಪೂಜಿತ್ ಕುಮಾರ್, ಮೂಗೂರು ಕುಮಾರಸ್ವಾಮಿ, ಡಾ. ಪ್ರದೀಪ್, ಪುಟ್ಟ ಮಲ್ಲಯ್ಯ, ಶ್ರೀನಿವಾಸ್, ಚಿದರವಳ್ಳಿ ಮಹೇಶ, ಸುರೇಶ, ತೋಟೇಶ್,  ಅಕ್ಬರ್ ಪಾಷಾ, ನಾಗೇಂದ್ರ, ನಾಗರಾಜು, ರಾಜೇಶ್, ತ್ರಿವೇಣಿ ನಗರ ಮಹದೇವಮ್ಮ,  ಕೋಮಲ, ರತ್ನಮ್ಮ, ಹಾಜರಿದ್ದರು.

(ವರದಿ: ನಂಜುಂಡ ನಿಲಸೋಗೆ)

 

Join WhatsApp Channel

Join Now

Telegram Join

Join Now

Instagram Join

Join Now