
ಉಪ ಆಯುಕ್ತ ಡಿ.ಕೆ.ಬಾಬು, ಕಂದಾಯ ಅಧಿಕಾರಿ ವರಲಕ್ಷ್ಮಿ ಅಮಾನತ್ತು ಪ್ರಸ್ತಾವನೆ ಹಿಂಪಡಯಬೇಕು ಮೇಣದ ದೀಪ ಹಚ್ಚಿ ಮೌನ ಪ್ರತಿಭಟನೆ
ಜಿಬಿಎ ನೌಕರರ ಭವನ: ದಕ್ಷಿಣ ವಲಯ ಉಪ ಆಯುಕ್ತ ಡಿ.ಕೆ.ಬಾಬು ಮತ್ತು ಕಂದಾಯ ಅಧಿಕಾರಿ ಶ್ರೀಮತಿ ವರಲಕ್ಷ್ಮಿ ರವರನ್ನು ಕಾನೂನು ಬಾಹಿರವಾಗಿ ಅಮಾನತ್ತು ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನ ಖಂಡಿಸಿ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತುರ್ತು ಸಭೆ ಮತ್ತು ಮೇಣದ ದೀಪ ಹಚ್ಚುವ ಮೂಲಕ ಮೌನ ಪ್ರತಿಭಟನೆ ನಡೆಸಲಾಯಿತು.
ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಸಂಘದ ಪದಾಧಿಕಾರಿಗಳು ಮತ್ತು ನೂರಾರು ಅಧಿಕಾರಿ, ನೌಕರರು ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ *ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು* ಮಾತನಾಡಿ ಉಗರಿನಲ್ಲಿ ಹೋಗುವದಕ್ಕೆ ಕೊಡಲಿ ತೆಗೆದುಕೊಂಡು ಅಧಿಕಾರಿ, ನೌಕರರನ್ನು ಕಾನೂನು ಬಾಹಿರವಾಗಿ ಮಟ್ಟ ಹಾಕುವುದನ್ನ ಖಂಡಿಸಿ ನಮ್ಮ ಮೌನ ಪ್ರತಿಭಟನೆ.
ಕಂದಾಯ ಇಲಾಖೆಗೆ ಕರಾಳ ದಿನವಾಗಿದೆ. ಸಾಂಕೇತಿಕವಾಗಿ ನಮ್ಮ ಹೋರಾಟ ಪ್ರಾರಂಭವಾಗಿದೆ.
ರಾಂಡ್ ರಾಬಿನ್ ಅವೈಜ್ಞಾನಿಕ ಪದ್ದತಿಯಿಂದ ಅಧಿಕಾರಿಗಳಿಗೆ ಕಿರುಕುಳ ಅನುಭವಿಸುತ್ತಿದ್ದಾರೆ.
ಲೋಕಾಯುಕ್ತ ತನಿಖೆ, ಕೇಸ್ ಗಳು ಇರುತ್ತದೆ ಅಂತಹ ಖಾತೆಗಳು ಮಾಡಲು ಬರುವುದಿಲ್ಲ ಸಾವಿರಾರು ಖಾತೆ ಆಗಿಲ್ಲ.
ಸಾವಿರಾರು ಇ-ಖಾತೆ ರದ್ದಾಗಿದೆ ಅದರೆ ಈ ಇಬ್ಬರ ಮೇಲೆ ದ್ವೇಶ ಸಾಧನೆ ಮಾಡಲು ಅಮಾನತ್ತು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯ.
ಪ್ರತಿದಿನ ಕಂದಾಯ ಇಲಾಖೆ ಅಧಿಕಾರಿ, ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ. ಜಿಬಿಎ ಪಂಚ ಪಾಲಿಕೆಯಲ್ಲಿ 12ಸಾವಿರ ಹುದ್ದೆಗಳಿಗೆ ನೇಮಕಾತಿ ಆಗಿಲ್ಲ.
ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸತತ ಕಿರುಕುಳ ನೀಡುತ್ತಿದ್ದಾರೆ. ನಗರದ ಜನರಿಗೆ ತೊಂದರೆಯಾಗಬಾರದು ಎಂದು ಮೌನವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಇನ್ನು ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ.
ರಾಜ್ಯ ಸರ್ಕಾರ ಮತ್ತು ಉಪಮುಖ್ಯಮಂತ್ರಿಗಳು, ಮುಖ್ಯ ಆಯುಕ್ತರಿಗೆ ಒಳ್ಳೆಯ ಹೆಸರು ಬರಬೇಕು ಎಂಬ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ನಮಗೆ ನ್ಯಾಯ ಕೊಡಿ.
ಕಾನೂನು ಬಾಹಿರವಾಗಿ ಅಮಾನತ್ತು ಪ್ರಸ್ತಾವನೆ ಹಿಂಪಡೆಯಬೇಕು ಎಂಬ ಅಗ್ರಹ ಎಂದು ಹೇಳಿದರು.
ನಮ್ಮ ಬೇಡಿಕೆ ಈಡೇರಿಕೆಗಾಗಿ ಡಿ.23ರಂದು ಕೇಂದ್ರ ಪಾಲಿಕೆ, ಡಿ. 24ರಂದು ದಕ್ಷಿಣ ಪಾಲಿಕೆ, ಡಿ.26ರಂದು ಪಶ್ಚಿಮ ಪಾಲಿಕೆ, ಡಿ.29 ರಂದು ಪೂರ್ವಪಾಲಿಕೆ ಮತ್ತು ಡಿ.30ರಂದು ಉತ್ತರ ಪಾಲಿಕೆಯಲ್ಲಿ ಮೇಣದ ಬತ್ತಿ ಹಚ್ಚಿ ಶಾಂತಿಯುತವಾಗಿ ಒಂದು ನಿಮಿಷ ಪ್ರತಿಭಟನೆ ನಡೆಸಲಾಗುವುದು.





