
ದೆಹಲಿಯಿಂದ-ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೆಲವೇ ನಿಮಿಷಗಳಲ್ಲಿ ವಾಪಾಸ್.!
ದೆಹಲಿ: ಸೋಮವಾರ ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಎಐ-887 ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಾಪಾಸ್ ಆಗಿವೆ. ಈ ವಿಮಾನ ತಾಂತ್ರಿಕ ಸಮಸ್ಯೆಯಿಂದ ಹಿಂತಿರುಗಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದೆ.
ವಿಮಾನ ಸಮಯಕ್ಕೆ ಸರಿಯಾಗಿ ಹೊರಟಿತ್ತು. ಆದರೆ ಟೇಕ್ ಆಫ್ ನಂತರ ಕಾಕ್‌ಪಿಟ್‌ನಲ್ಲಿ ತಾಂತ್ರಿಕ ದೋಷದ ಲಕ್ಷಣಗಳು ಕಾಣಿಸಿಕೊಂಡಿದ್ದು, ಪೈಲಟ್ ತಕ್ಷಣ ಎಚ್ಚರಿಕೆ ವಹಿಸಿ ಹಿಂತಿರುಗುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರವೇ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಪೈಲಟ್ ತಕ್ಷಣ ಎಚ್ಚರಿಕೆ ವಹಿಸಿ ಹಿಂತಿರುಗುವ ನಿರ್ಧಾರ ತೆಗೆದುಕೊಂಡಿದ್ದಾರೆ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
ಏರ್ ಇಂಡಿಯಾ ವಕ್ತಾರರು ವಿಮಾನ ವಾಪಾಸ್ ಆದ ಬಗ್ಗೆ ಹೇಳಿಕೆ ನೀಡಿ, ಪೈಲಟ್ ಮತ್ತು ಸಿಬ್ಬಂದಿ ಯಾವುದೇ ಅವಕಾಶ ತೆಗೆದುಕೊಳ್ಳದೆ ಸುರಕ್ಷತೆಗೆ ಆದ್ಯತೆ ನೀಡಿದರು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದರು. ಪ್ರಯಾಣಿಕರಿಗೆ ಉಂಟಾದ ವಿಳಂಬ ಮತ್ತು ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ವಿಮಾನದ ಎಂಜಿನಿಯರಿಂಗ್ ಮತ್ತು ತಾಂತ್ರಿಕ ತಂಡಗಳು ವಿಮಾನದ ಪರಿಶೀಲನೆ ಪ್ರಾರಂಭಿಸಿವೆ. ತೊಂದರೆಗೊಳಗಾದ ಪ್ರಯಾಣಿಕರಿಗೆ ಪರ್ಯಾಯ ವಿಮಾನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.
ದೆಹಲಿ ವಿಮಾನ ನಿಲ್ದಾಣದ ನೆಲ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಪ್ರಯಾಣಿಕರನ್ನು ಟರ್ಮಿನಲ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಿದರು. ಚಳಿಗಾಲದ ರಜಾದಿನಗಳಿಂದ ವಿಮಾನಗಳಲ್ಲಿ ಭಾರೀ ಜನದಟ್ಟಣೆಯಿದೆ. ದೆಹಲಿ-ಮುಂಬೈ ಮಾರ್ಗ ದೇಶದ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದು. ಪ್ರತಿದಿನ ಹೆಚ್ಚಿನ ಸಂಖ್ಯೆಯ ವಿಮಾನಗಳು ಸಂಚರಿಸುತ್ತವೆ. ಈ ಘಟನೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.





