
ಉಡುಪಿಯ ಹರೀಶ್ ಪೂಜಾರಿ ಓಂ ಚಿತ್ರದ ‘ರಾಯ್’ ಆಗುವ ಮುನ್ನ ನಡೆದ ಆ ಕೊಲೆ ಕೇಸ್!
**************************
ಹರೀಶ್ ರೈ ಇನ್ನಿಲ್ಲ…. ಅನ್ನುವುದನ್ನ ಅರಗಿಸಿಕೊಳ್ಳಲಿಕ್ಕೆ ಸಾಧ್ಯವೇ ಆಗುತ್ತಿಲ್ಲ!
ಅವರೊಬ್ಬ ಅಪರೂಪದ ಕಲಾವಿದರು.
ಈ ನಟನನ್ನು ಕನ್ನಡ ಚಿತ್ರರಂಗ ಮೊದಲ ಬಾರಿಗೆ ಗುರುತಿಸಿದ್ದು ಓಂ ಚಿತ್ರದಲ್ಲಿ. ಅದರಲ್ಲಿ ಅವರು ಮಾಡಿದ ರಾಯ್ ಪಾತ್ರ ಇಂದಿಗೂ ಹಸಿರಾಗಿದೆ.
ಕುತ್ತಿಗೆಯವರೆಗೆ ಇಳಿಬಿದ್ದ ಉದ್ದನೆಯ ಕೂದಲು, ಸಣಕಲು ದೇಹ, ಸ್ವಲ್ಪ ಕೀರಲು ಧ್ವನಿ ಮತ್ತು ಪವರ್ ಫುಲ್ ಎನಿಸುತ್ತಿದ್ದ ಕಣ್ಣುಗಳು! ಓಂ ನಲ್ಲಿ ಮುತ್ತಪ್ಪ ರೈ ಕ್ಯಾರೆಕ್ಟರ್ ಮಾಡಿದ್ದ ಹರೀಶ್ ರೈ, ಅನಂತರ ರಾಯ್ ಅಂತಲೇ ಫೇಮಸ್ ಆದರು. ವಾಸ್ತವದಲ್ಲಿ ಅವರ ಮೂಲ ಹೆಸರು ರೈ – ರಾಯ್ ಇದ್ಯಾವುದೂ ಅಲ್ಲ.
ಹರೀಶ್ ಪೂಜಾರಿ!
ಉಡುಪಿಯವರಾದ ಹರೀಶ್ ಪೂಜಾರಿ ಅವರ ತಾಯಿಯ ತಂದೆ ಅಂದ್ರೆ ಅಜ್ಜ ಚಿನ್ನದ ಅಂಗಡಿ ಮಾಲೀಕರಾದರೆ, ತಂದೆ ಜಮೀನ್ದಾರರು.
ಟೆನೆನ್ಸಿ ಆಕ್ಟ್ (ಉಳುವವನೇ ಭೂಮಿಯ ಒಡೆಯ) ಕಾಯ್ದೆ ಜಾರಿಯಾದ ನಂತರ ಹರೀಶ್ ಪೂಜಾರಿಯವರ ಕುಟುಂಬದ ಬಹುತೇಕ ಜಮೀನು,
ತೋಟ ಗದ್ದೆಗಳು ಅವರ ಕೈ ಬಿಟ್ಟವಂತೆ. ಉಳಿದ ಒಂದಿಷ್ಟು ತೋಟ ಇತ್ತು ಅಷ್ಟೇ ಎನ್ನಲಾಗಿದೆ.
ಹರೀಶ್ ಬೆಳೆದಿದ್ದು ನೆಂಟರ ಮನೆಯಲ್ಲಿ. ಶಾಲೆಯಲ್ಲಿ ಭಯಂಕರ ತುಂಟನಾಗಿದ್ದ ಹರೀಶ್, 10ನೇ ಕ್ಲಾಸ್ ಓದುತ್ತಿರುವಾಗಲೇ ಬಾಂಬೆಗೆ ಹೋದವರು. ಒಮ್ಮೆ ನಿಮ್ಮ ಅಪ್ಪನನ್ನು ಸ್ಕೂಲಿಗೆ ಕರೆದುಕೊಂಡು ಬಾ ಎಂದು ಮೇಷ್ಟರು ಹೇಳಿದ್ದಕ್ಕೆ ಹರೀಶ್ ಉಡುಪಿಯನ್ನೇ ಬಿಟ್ಟು ಹೋದ ಮುಂಬೈ ಗೆ ಹೋದರು. ಅಲ್ಲಿ ಹೋಟೆಲ್ಲೊಂದರಲ್ಲಿ ಕೆಲಸ ಮಾಡಿದರು. ಅಲ್ಲಿದ್ದವರಿಗೆ ಹರೀಶ್ ಪೂಜಾರಿ ಅವರ ಹಿನ್ನೆಲೆ ಗೊತ್ತಾಗಿ ಊರಿಗೆ ಕಳಿಸಿದರೂ.. ಅಷ್ಟು ಹೊತ್ತಿಗಾಗಲೇ ಬಾಂಬೆಯಲ್ಲಿದ್ದ ಕೆಲವು ಭೂಗತ ಜಗತ್ತಿನ ಚೋಟು ಮೋಟುಗಳ ಪರಿಚಯ ಆಗಿತ್ತು.
ಒರಟುತನ ಹರೀಶ್ ಅವರ ವ್ಯಕ್ತಿತ್ವದಲ್ಲೇ ಇತ್ತು.
1992, ನವೆಂಬರ್ 13. ಉಡುಪಿಯಲ್ಲಿ ಹರೀಶ್ ಅವರು ಒಂದು ಗ್ಯಾಂಗ್ ಕಟ್ಟಿಕೊಂಡು ಹೋಗಿ ಜಯರಾಮ್ ಎಂಬ ಸ್ಕೂಲ್ ಮಾಸ್ಟರ್ ನನ್ನು ಹೊಡೆದು ಬಂದಿದ್ದರು. ಯಾವ ಮಟ್ಟಿಗೆ ಹೊಡೆದಿದ್ದರೆಂದರೆ ಆತ ಒಂದು ವಾರ ಕಾಲ ಆಸ್ಪತ್ರೆಯಲ್ಲಿದ್ದ. ನಂತರ ಅಲ್ಲಿಯೇ ಪ್ರಾಣ ಬಿಟ್ಟಿದ್ದರು. ಹರೀಶ್ ಗೆ ಮರ್ಡರ್ ಕೇಸ್ ಬೆನ್ನು ಹತ್ತಿದ್ದೇ ಆಗ. ಆ ಕೇಸಿನ ಬಗ್ಗೆ ಹರೀಶ್ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ಜಾಮೀನಿನ ಮೇಲೆ ಹೊರಗಿದ್ದರು. ಆದರೆ ಊರಿನಲ್ಲಿ ಇರಲು ಆಗದೆ ಬೆಂಗಳೂರಿಗೆ ಬಂದರು. ಉಡುಪಿ ಕುಂದಾಪುರ ಸಂಪರ್ಕಗಳ ಮೂಲಕ ಉಪೇಂದ್ರ ಪರಿಚಯ ಮಾಡಿಕೊಂಡು,’ಓಂ’ ನಲ್ಲಿ ನಟಿಸಿದರು. ಮುಂದೆ ಇನ್ನು ಹತ್ತಾರು ಸಿನಿಮಾ ಸಿಕ್ಕಿದವು. ಒಂದೆಡೆ ನಟನೆ, ಇನ್ನೊಂದೆಡೆ ಕೋರ್ಟ್ ವಿಚಾರಣೆ.ಜಿಲ್ಲಾ ನ್ಯಾಯಾಲಯದಲ್ಲಿ ವಾದ ವಿವಾದ ನಡೆದು 2003ರಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಗಿತ್ತು!
ಉಡುಪಿ ಜೈಲು ಸೇರಿದ ಹರೀಶ್ ರಾಯ್, ಆಮೇಲೆ ಕೇಸಿನ ಬಗ್ಗೆ ತುಂಬಾ ತಲೆಕೆಡಿಸಿಕೊಂಡರು.
ಅವಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುತ್ತಪ್ಪ ರೈ ಸಿಕ್ಕಿ ‘ಸ್ನೇಹ’ ಕುದುರಿತ್ತು.ಅವರ ಕೃಪೆಯಿಂದಲೆ
ಉಡುಪಿ ಮೇಷ್ಟ್ರು ಜಯರಾಮ್ ಮೇಲೆ ಹಲ್ಲೆ ನಡೆದಾಗ ಹರೀಶ್ ರಾಯ್ ಸ್ಥಳದಲ್ಲೇ ಇರಲಿಲ್ಲವೆಂದು ಅವರ ಲಾಯರ್ ವಾದಿಸಿ ಗೆದ್ದರು. ಕೊನೆಗೆ ಹರೀಶ್ ರಾಯ್ ಆ ಕೇಸ್ ನಿಂದ ಖುಲಾಸೆಯಾದರು….09 ತಿಂಗಳು ಜೈಲಿನಲ್ಲಿದ್ದು ಹೊರಗೆ ಬಂದರು.
ಆದರೆ ಅಷ್ಟೊತ್ತಿಗೆ ಅವರ ಕೈಲಿದ್ದ ಹಲವು ಸಿನಿಮಾಗಳು ಕೈ ತಪ್ಪಿ ಹೋಗಿದ್ದವು. ಜೈಲಿನಿಂದ ಹೊರಬಂದ ಮೇಲೆ ಹರೀಶ್ ರಾಯ್ ಕೂಡ ಬದಲಾಗಿದ್ದರು. ಆದರೆ..
ಈ ಹಿಂದೆ ನಟಿಸಿದ್ದ ಚಿತ್ರಗಳಲ್ಲಿ ಹರೀಶ್ ರಾಯ್ ಅವರ ಹುಚ್ಚು ವರ್ತನೆ, ಕುಡಿತಗಳನ್ನು ನೋಡಿದ್ದವರು ಮತ್ತೆ ಹರೀಶ್ ರಾಯ್ ಹತ್ತಿರವೂ ಸುಳಿಯಲಿಲ್ಲ.
ತಾನು ಬದಲಾಗಿದ್ದೇನೆ ಎಂದು ಸಾಬೀತು ಮಾಡುವಷ್ಟರಲ್ಲಿ ಹರೀಶ್ ರಾಯ್ ಅವರ ವೃತ್ತಿ ಜೀವನದ ಒಂದಷ್ಟು ವರ್ಷಗಳು ಕಳೆದು ಹೋಗಿದ್ದವು. ಮುಂದೆ ಯಾವ ಜನ್ಮದ ಪುಣ್ಯವೋ ಎಂಬಂತೆ, ಕೆ ಜಿ ಎಫ್ ಸಿಕ್ಕಿತು!
ಅದರಲ್ಲಿ ಅವರು ಮಾಡಿದ ಖಾಸಿಂ ಚಾಚಾ ಪಾತ್ರ ವರ್ಣನಾತೀತವಾದದ್ದು.
ರಾಕಿ ಭಾಯ್ ಯಶ್ ಮತ್ತು ಹರೀಶ್ ರಾಯ್ ನಡುವೆ ತಂದೆ ಮಗನ ಬಾಂಧವ್ಯ ಬೆಳೆದಿತ್ತು.
ಈ ಜೋಡಿ ಮುಂದೆ ಕೆ ಜಿ ಎಫ್ 3 ನಲ್ಲಿ ನಟಿಸುವುದಿತ್ತು….
ಆದರೆ….ವಿಧಿಯಾಟ.
ಹರೀಶ್ ರಾಯ್ ಅವರ ದೇಹದಲ್ಲಿ ಕ್ಯಾನ್ಸರ್ ವ್ಯಾದಿ…..ಅವರ ರಕ್ತದ ಕಣಕಣದಲ್ಲೂ ವ್ಯಾಪಿಸಿಬಿಟ್ಟಿತ್ತು! ಥೈರಾಯಿಡ್ ಕ್ಯಾನ್ಸರ್ ಅಂತೇ. ಕಿದ್ವಾಯಿ ಆಸ್ಪತ್ರೆಯಲ್ಲಿ ಕಳೆದ 2 ವರ್ಷದಿಂದಲೂ ಚಿಕಿತ್ಸೆ ತೆಗೆದು ಕೊಳ್ಳುತ್ತಿದ್ದರು. ಈ ನಡುವೆ ವ್ಯಾದಿ ಉಲ್ಬಣಗೊಂಡಿತ್ತು.
ಹರೀಶ್ ರಾಯ್ ಅವರ ದುಸ್ಥಿತಿ ಗೆ ಮರುಗಿದವರಿಲ್ಲ.
ಅದಕ್ಕೆ ಕಾರಣ… ಅವರು ತುಂಬಾ ನೊಂದಿದ್ದರು ಮತ್ತು
ಬದಲಾಗಿದ್ದರು.
ಹರೀಶ್ ರಾಯ್ ಅವರಿಂದ ತೊಂದರೆ ಅನುಭವಿಸಿದ್ದವರೂ ಕೂಡ
ಈ ಮನುಷ್ಯ ಬದುಕಿ ಬಿಡಲಿ ದೇವರೇ ಎಂದು ಪ್ರಾರ್ಥಿಸಿದ್ದರು ಗೊತ್ತಾ… ಆದರೆ ಅವರ ಪ್ರಾರ್ಥನೆ ಫಲಿಸಲಿಲ್ಲ…..
ದಿನಾಂಕ 06-11-2025 ಗುರುವಾರ ಮದ್ಯಾನ 11 ಗಂಟೆ ವೇಳೆಗೆ ಆ ಆಸ್ಪತ್ರೆಯಲ್ಲೇ ಉಸಿರು ಚಲ್ಲಿದರು ಹರೀಶ್ ರಾಯ್!
ಹರೀಶ್ ಅವರ ಪತ್ನಿ ಹೇಮಾ.ಖಾಸಗಿ ಸ್ಕೂಲ್ ಟೀಚರ್. ಇಬ್ಬರು ಗಂಡು ಮಕ್ಕಳು….ಓದುತ್ತಿವೆ.ಈಗ ಅವರಿಗೆ ಯಾರೂಧಿಕ್ಕಿಲ್ಲ!
ಇಲ್ಲೇ ಬೆಂಗಳೂರಲ್ಲಿದ್ದ ದ್ರುವ ಸರ್ಜಾ ಓಡೋಡಿ ಬಂದು ಆ ಮಕ್ಕಳಿಗೆ ಕೈ ತುತ್ತು ತಿನ್ನಿಸಿ ಕಣ್ಣೀರಿಟ್ಟಿದ್ದಾರೆ. ಮುಂಬೈನಲ್ಲಿ ಶೂಟಿಂಗ್ ನಲ್ಲಿದ್ದ ರಾಕಿ ಭಾಯ್ ಪ್ರೈವೇಟ್ ಜೆಟ್ ವಿಮಾನದಲ್ಲಿ ಆಗಮಿಸಿ, ತಾಯಿ ಮಕ್ಕಳಿಗೆ ಸಾಂತ್ವನ ಹೇಳಿ, ಕೈಲಾದಷ್ಟು ಹಣ ಕೊಟ್ಟು ನಿಮ್ಮೊಂದಿಗೆ ನಾನಿದ್ದೇನೆ…ಎಂದಿದ್ದಾರೆ.
ಉಳಿದಂತೆ,ಚಲನ ಚಿತ್ರರಂಗದ ಇಷ್ಟದ ನಟ ನಟಿಯರು ರಾಯ್ ಅಂತಿಮ ದರ್ಶನ ಪಡೆದು ಕೈಲಾದ ನೆರವು ನೀಡಿದ್ದಾರೆ. ಶುಕ್ರವಾರ ಜನ್ಮಸ್ಥಳ ಉಡುಪಿಯಲ್ಲಿ ಶವ ಸಂಸ್ಕಾರ ಕಾರ್ಯ ನೆರವೇರಿಸಿ ರಾಯ್ ಅವರ ಆತ್ಮಕ್ಕೆ ಶಾಂತಿ ಕೋರಲಾಗಿದೆ!
**********
Box: ಕಲಾವಿದರ ಸಂಘದಲ್ಲಿ ದುಡ್ಡಿಲ್ಲವೇ? ನಮ್ಮ ಸ್ಟಾರ್ ಗಳೇಕೆ ಹೀಗೆ?!
,*************
ಆಂಧ್ರ ತಮಿಳುನಾಡು ಕೇರಳ ಮುಂತಾದ ರಾಜ್ಯಗಳಲ್ಲಿ ಯಾವುದೇ ಕಲಾವಿದರಿಗೆ, ತಂತ್ರಜ್ಞರಿಗೆ ತೊಂದರೆ ಆದರೆ ಅಲ್ಲಿನ ಕಲಾವಿದರ ಸಂಘ ಕೂಡಲೇ ನೆರವಿಗೆ ನಿಲ್ಲುತ್ತದೆ. ಅಲ್ಲಿನ ಸ್ಟಾರ್ ಗಳು ಕೂಡಲೇ
ಸಹಾಯಸ್ತ ಚಾಚಿ “ಹೆದರಬೇಡಿ,ನಾನಿದ್ದೇನೆ” ಅನ್ನುತ್ತಾರೆ.
ಕಳೆದ ವರ್ಷ ಹೆಸರಾಂತ ಖಳ ಪಾತ್ರದಾರಿ ಪೊನ್ನ ಬಲಂ ಗೆ ಕ್ಯಾನ್ಸರ್ ಆಗಿ ಆತ ಆಸ್ಪತ್ರೆ ಯಲ್ಲಿದ್ದಾಗ, ಎಷ್ಟೇ ಖರ್ಚ
ಆಗಲಿ… ನಾನು ಭರಿಸುತ್ತೇನೆ ” ಎಂದು ಹೇಳಿದ್ದು, ಚಿಕಿತ್ಸೆ ಕೊಡಿಸಿ ಆಸ್ಪತ್ರೆ ಬಿಲ್ ಪಾವತಿಸಿದ್ದು ಮೆಗಾಸ್ಟಾರ್ ಚಿರಂಜೀವಿ! ಪೊನ್ನಂ ಬಲಂ ಚನ್ನೈನಲ್ಲಿದ್ದವರು. ಇಲ್ಲಿದ್ದ ರಜನಿಗೂ ಚಾನ್ಸ್ ಕೊಡದೆ ಹೈದ್ರಾಬಾದ್ ನಿಂದ ಬಂದು ಒಬ್ಬ ಕಲಾವಿದನ ಜೀವ ಉಳಿಸಿದರು ಚಿರಂಜೀವಿ!
ಇಂಥ ಸಹೃದಯ ನಮ್ಮ ಸ್ಟಾರ್ ಗಳಿಗೇಕಿಲ್ಲ? ಎಲ್ಲೋ ಒಬ್ಬದರ್ಶನ್,ಒಬ್ಬ ದ್ರುವ ಒಂದಷ್ಟು ಲಕ್ಷ ಕೊಟ್ರೆ ಉಳಿದವರು??
ಹರೀಶ್ ರಾಯ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯಲ್ಲಿ ಒಂದು ಇಂಜೆಕ್ಷನ್ ಗೆ ಮೂರು ಲಕ್ಷ ರೂ ಆಗುತ್ತಿತ್ತಂತೆ.ಬಡ ಕಲಾವಿದ
ಪ್ರತಿನಿತ್ಯ ಅಷ್ಟೊಂದು ಹಣ ಎಲ್ಲಿಂದ ತಂದು ಕೊಡುತ್ತಾರೆ ಹೇಳಿ? ಒಟ್ಟು 80 ಲಕ್ಷ ರೂ ಕೊಟ್ಟು ಶೀಘ್ರ ಆಪರೇಷನ್ ಮಾಡಿಸಿದ್ರೆ ಹರೀಶ್ ಬದುಕುತ್ತಿದ್ದರಂತೆ! ನಮ್ಮಲ್ಲಿ ಎಂಟು ಜನ ಸ್ಟಾರ್ಸ್ ತಲಾ 20 ಲಕ್ಷ ಕೊಟ್ಟಿದ್ದರೂ ಆಗುತ್ತಿತ್ತಲ್ಲವೇ??ಇನ್ನಾದರೂ
ಸಹೃದಯವಂತರಾಗಿ….. ಸ್ಟಾರ್ ಗಳೇ….. ಹೋಗುವಾಗ ಹೊತ್ಕೊಂಡು ಹೋಗ್ತೀರಾ…. ಕಾಚಾ ಉಡುದಾರ ಕೂಡ ಕಿತ್ತು ಬಿಸಾಡುತ್ತಾರೆ,ಹೂಳೋರು!!
(ಬರವಣಿಗೆ-ಮಹಾದೇವ್)





