--Ads--

ಧಾರವಾಡ: ಝಕಿಯಾ ಮುಲ್ಲಾ ಕೊಲೆಯಲ್ಲಿ ಆಘಾತಕಾರಿ ಬದಲಾವಣೆ – ಪ್ರಿಯಕರ ಸಾಬೀರ್ ಮುಲ್ಲಾಯೇ ಆರೋಪಿ!

On: January 23, 2026 4:11 PM
Follow us on:
--ಜಾಹೀರಾತು--

Whatsapp Channel

Join Now

Telegram Group

Join Now

ಧಾರವಾಡ: ಕೆಲಸ ಹುಡುಕುವ ಉದ್ದೇಶವಾಗಿ ಮನೆಯಿಂದ ಹೊರಟಿದ 19 ವರ್ಷದ ಯುವತಿ ಝಕಿಯಾ ಮುಲ್ಲಾಳ ಶವವು ನಗರದ ಮನಸೂರು ರಸ್ತೆಯ ಡೈರಿ ಬಳಿ ಪತ್ತೆಯಾಗಿತ್ತು. ಈಗ ಈ ಕೊಲೆ ಕೇಸ್‌ಗೆ ದೊಡ್ಡ ತಿರುವು ಸಿಕ್ಕಿದ್ದು, ಪ್ರೀತಿಸಿದ ಸಾಬೀರ್ ಮುಲ್ಲಾನೇ ಕೊಲೆಗಾರ ಎಂದು ಪೊಲೀಸ್ ತನಿಖೆ ಬಹಿರಂಗಪಡಿಸಿದೆ.

ಪರಸ್ಪರ ಪ್ರೇಮದಲ್ಲಿದ್ದ ಇಬ್ಬರ ಕುಟುಂಬಗಳು ಮದುವೆಗೆ ಒಪ್ಪಿ, ಮುಂದಿನ ತಿಂಗಳು ನಿಶ್ಚಿತಾರ್ಥ ಆಯೋಜಿಸಿದ್ದವು. ಆದರೆ ಜನವರಿ 20ರ ಸಂಜೆ ಒಟ್ಟಿಗೆ ಹೊರಟಿದ ಇಬ್ಬರ ನಡುವೆ ಮದುವೆ ವಿಷಯಕ್ಕೆ ಜಗಳವೊಂದು ಉಂಟಾಗಿ, ಆಕ್ರೋಶಿತನಾದ ಸಾಬೀರ್ ವೇಲುಗಳಿಂದ ಝಕಿಯಾಳ ಕತ್ತು ಹಿಸುಗೆ ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಇವರು ಸಂಬಂಧಿಕರೂ ಆಗಿದ್ದರು.

ಹೆಚ್ಚುವರಿ ಆಶ್ಚರ್ಯಕರ ವಿಷಯ ಎಂದರೆ, ಕೊಲೆ ಸ್ಥಳದಲ್ಲೇ ಇದ್ದ ಸಾಬೀರ್ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಕರೆ ಮಾಡಿ ಘಟನೆಯ ಮಾಹಿತಿ ನೀಡಿ, ಪೊಲೀಸರು ಬಂದಾಗ ಸ್ಥಳದಲ್ಲೇ ನಟಿಸಿದ್ದ. ಅನುಮಾನಗೊಂಡ ಪೊಲೀಸರು ವಿಚಾರಣೆಗೆ ತೆಗೆದುಕೊಂಡಾಗ ಸತ್ಯ ಹೊರ ಬಂದಿತು.

ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸಾಬೀರ್ ಮುಲ್ಲಾವನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮರಣೋತ್ತರ ವರದಿ ಬಂದ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ.

ವರದಿ :- ಆಂಟೋನಿ ಪತ್ರಕರ್ತ

Join WhatsApp Channel

Join Now

Telegram Join

Join Now

Instagram Join

Join Now